Friday, July 17, 2009

ದೇವತೆ

ಮಾರ ಮಾಂಸ ತಿನ್ನುವುದನ್ನು ಬಿಟ್ಟ
ಮನೆ ದೇವರು ಮಾರಿ
ಮನೆ ಬಿಟ್ಟು ಪರಾರಿ
ದಯವಿಟ್ಟು ಹುಡುಕಿಕಡೊಡಿ
ಅವನು ಅದೇ ಚಿಂತೆಯಲ್ಲಿ
ಕುಡಿಯುವದನ್ನು ಜಾಸ್ತಿ ಮಾಡಿಕೊಂಡಿದ್ದಾನೆ
ದೇವರಿಲ್ಲ ದಿಂಡಿರಿಲ್ಲ ಎಂದು
ರಸ್ತೆಯಲ್ಲಿ ಬಿದ್ದುಕೊಂಡು
ಬಡಬಡಿಸುತ್ತಿದ್ದಾನೆ
ದಯವಿಟ್ಟು ಹುಡುಕಿಕೊಡಿ

ಮಾಂಸ ತಿನ್ನುವುದ ಕಲಿತ ಶಾಸ್ತ್ರಿ
ಮನೆ ದೇವರು ಸರಸ್ವತಿ ಸಹಾ ಪರಾರಿ
ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ
ಬಡ ಬ್ರಾಹ್ಮಣ
ಮಂತ್ರ ಗೊತ್ತಿರದಿದ್ದರು
ಬಡಬಡಿಸುತ್ತಾನೆ
ಅರ್ಚಕನಾಗಿದ್ದಾನೆ
ದೇವರಿಲ್ಲವೆಂಬ ಸತ್ಯ ತಿಳಿದು

ಇಬ್ಬರ ಮನೆಯು ಬಣ ಬಣ
ದೇವರಿಲ್ಲ
ಅಡುಗೆ ಮನೆ ಟಣ ಟಣ
ದೇವತೆ...
ನೀ ಎಲ್ಲಿದ್ದರು ಬೇಗ ಮನೆಗೆ ಮರಳಿ ಬಾ
ಈ ಸುದ್ದಿ ನೋಡಿದ ಕೂಡಲೇ
ದಯವಿಟ್ಟು ಬಾ...