Wednesday, December 30, 2009

ಗೆಳೆಯ
ನಿನ್ನ ಪ್ರೀತಿಯ ಬಿತ್ತಿ ಚಿತ್ರಗಳು
ಪ್ರತಿ ಕೇರಿಯಲ್ಲಿ ಬೆಳಗಲಿ
ಪ್ರತಿವಾರ ಬಿಡುಗಡೆಯಾಗಿ
ಮಾಯವಾಗುವ ಕನ್ನಡ ಚಲನಚಿತ್ರಗಳ
ಪೋಸ್ಟರ್್ಗಳ ಹಾಗೆ
ವಾರ್ಷಿಕ ವರದಿಯಲ್ಲಿ ಒಂದಾದರು ಯಶ ಕಾಣಲಿ.

Tuesday, August 25, 2009

ಸತ್ಯದೊಳಗಣ ಸತ್ಯ


ಸಂಪೂರ್ಣ ಸತ್ಯ
ಅಥಾವ ಸುಳ್ಳುಗಳಿಂದ
ಸಂಬಂಧಗಳು ಬೆಳೆಯುವದು
ಮತ್ತೇ ಉಳಿಯುವುದು
ಅಸಾದ್ಯ

ಒಂದೇ ಒಂದು ವಸ್ತುವಿನಿಂದ
ರುಚಿಕರವಾದ ಅಡುಗೆ
ಸಾಧ್ಯವಿಲ್ಲ ಎನ್ನುವಷ್ಟು
ಸರಳ
ಈ ಜೀವನ.

ಸಿಗದ ಚಂದಿರಾ...


ಅರ್ಧಕ್ಕೆ ಕನಸ ತುಂಡರಿಸುವ

ಭಾವನೆಗಳು

ಕನಸಲ್ಲೂ ಭಯ ಪಡುವ

ಮನಸು

ಮಲಗು ಮನಸೇ

ಭಯ ಭಾವನೆಗಳನ್ನು ಮರೆತು

ಗೋರಿಯೊಳಗೆ

ಸಿಗದ ಚಂದಿರ

ನಿನ್ನ ಜೊತೆಗಿರುವನು.


Friday, July 17, 2009

ದೇವತೆ

ಮಾರ ಮಾಂಸ ತಿನ್ನುವುದನ್ನು ಬಿಟ್ಟ
ಮನೆ ದೇವರು ಮಾರಿ
ಮನೆ ಬಿಟ್ಟು ಪರಾರಿ
ದಯವಿಟ್ಟು ಹುಡುಕಿಕಡೊಡಿ
ಅವನು ಅದೇ ಚಿಂತೆಯಲ್ಲಿ
ಕುಡಿಯುವದನ್ನು ಜಾಸ್ತಿ ಮಾಡಿಕೊಂಡಿದ್ದಾನೆ
ದೇವರಿಲ್ಲ ದಿಂಡಿರಿಲ್ಲ ಎಂದು
ರಸ್ತೆಯಲ್ಲಿ ಬಿದ್ದುಕೊಂಡು
ಬಡಬಡಿಸುತ್ತಿದ್ದಾನೆ
ದಯವಿಟ್ಟು ಹುಡುಕಿಕೊಡಿ

ಮಾಂಸ ತಿನ್ನುವುದ ಕಲಿತ ಶಾಸ್ತ್ರಿ
ಮನೆ ದೇವರು ಸರಸ್ವತಿ ಸಹಾ ಪರಾರಿ
ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದ
ಬಡ ಬ್ರಾಹ್ಮಣ
ಮಂತ್ರ ಗೊತ್ತಿರದಿದ್ದರು
ಬಡಬಡಿಸುತ್ತಾನೆ
ಅರ್ಚಕನಾಗಿದ್ದಾನೆ
ದೇವರಿಲ್ಲವೆಂಬ ಸತ್ಯ ತಿಳಿದು

ಇಬ್ಬರ ಮನೆಯು ಬಣ ಬಣ
ದೇವರಿಲ್ಲ
ಅಡುಗೆ ಮನೆ ಟಣ ಟಣ
ದೇವತೆ...
ನೀ ಎಲ್ಲಿದ್ದರು ಬೇಗ ಮನೆಗೆ ಮರಳಿ ಬಾ
ಈ ಸುದ್ದಿ ನೋಡಿದ ಕೂಡಲೇ
ದಯವಿಟ್ಟು ಬಾ...

Sunday, June 28, 2009

ದೇವದಾಸಿ


ದೇವರು ಸತ್ತ ಸುದ್ದಿ

ಕೇಳಿ

ನನ್ನವ್ವ ದೇವದಾಸಿ

ದಿನ ತುಂಬುವುದಕ್ಕಿಂತ

ಮುಂಚೆ

ನನಗೆ ಜನ್ಮವಿತ್ತಳು


ಇಷ್ಟಪಡದೆ ಯಾರದೊ ಕಷ್ಟಕ್ಕೆ

ಹೊರ ಬಂದ ನಾನು

ಬಿಕ್ಕಿ ಬಿಕ್ಕಿ ಅತ್ತಿದ್ದೆ

ದಿನಕ್ಕೊಂದು ಅನಿಷ್ಟಗಳು

ನನಗಂಟತೊಡಗಿದ್ದವು

ಅನಿಷ್ಟಗಳಿಂದ ದೂರ ಮಾಡಲು

ನನ್ನಜ್ಜಿ

ದಿನಕ್ಕೆರಡರಂತೆ ಉಜ್ಜಿ ಉಜ್ಜಿ

ಮೈ ತೊಳೆದಳು


ಅವ್ವ ನೆಲಕಚ್ಚಿದಳು

ದಿನ ಕಳೆದಂತೆ

ಅರ್ಧ ಆಯುಷ್ಯದಲ್ಲಿ ಸತ್ತಿದ್ದ

ದೇವರು

ದೆವ್ವವಾಗಿಯಾದರು ಬಂದು

ಕಾಪಾಡುತ್ತಾನೆ

ಎಂಬ ಹಂಬಲ

ಅವಳ ಸಾವಿನ ಹಾಸಿಗೆಯ

ಮೂಲೆಯಲ್ಲಿ ಗಂಟು ಕಟ್ಟಿತ್ತು


ಅದರೊಳಗೊಂದೆರಡೂ

ರೂಪಾಯಿ

ನಾಣ್ಯಗಳು

ನಸಿ ಪುಡಿ ಅತ್ತಿದ್ದ

ಅಜ್ಜಿಗೆ ಸೇರಿದ್ದ

ಅಡಿಕೆ ಹೊಳುಗಳು

Friday, June 26, 2009

ಹೆಸರಿನ ಪ್ರೀತಿಯಲ್ಲಿ ನೆಟ್ಟೊಳಗೆ ಹುಡುಕಿದಾಗ ಸಿಕ್ಕದ್ದು


ಸಾಹಿತ್ಯ


ಸಾಹಿತ್ಯ

ಕವನ

ಕಾದಂಬರಿ

ಸಾಹಿತ್ಯ

ಪಲ್ಲವಿ

ಅನುಪಲ್ಲವಿ

ಸರಸ್ವತಿ (ವಿದ್ಯಾ ದೇವತೆ)

ಎಲ್ಲವೂ ನಮ್ಮ ಹುಡುಗಿಯರ ಹೆಸರುಗಳೇ

ಆದರೆ...

'ಸಾಹಿತ್ಯ' ಬರವಣಿಗೆಯಲ್ಲಿ ಅಲ್ಪ ಸಂಖ್ಯಾತರು.