Wednesday, June 17, 2009

ಸುಮ್ಮನೆ ಬರೆದೆ


ನಾಗತಿಹಳ್ಳಿ ಲೆಕ್ಕಾಚಾರ ಮತ್ತು ಆತ ಸೃಷ್ಟಿಸಿರುವ ಕೆಲವು ಪಾತ್ರಗಳ ಬಗ್ಗೆ ಹೇಳುವುದಾದರೆ ಸಿನಿಮಾದಲ್ಲಿ ಒಂದು ರೀತಿಯಲ್ಲಿ ಹಲವು ಪಾತ್ರಗಳು ನಾವು ಕೇಳಿದ ಮತ್ತು ನೋಡಿದ ಕೆಲವು ನಿಜ ವ್ಯಕ್ತಿಗಳನ್ನು ಕುರಿತದ್ದಾಗಿವೆ.
ರಂಗಾಯಣ ರಘು ಬಾರ್ನಲ್ಲಿ ಚಮಚಗಳನ್ನು ಕದಿಯುವು ಪಾತ್ರ ನಮ್ಮ ನಾಟಕ ಅಕಾಡೆಮಿಯ ಹಿಂದಿನ ಅಧ್ಯಕ್ಷರಾಗಿದ್ದ ಒಬ್ಬ ಪ್ರತಿಷ್ಟಿತ ನಾಟಕಕಾರನ ಚಟವಾಗಿದೆ. ಅವರು ಚಮಚ 'ಮತ್ತಿತರೆಯ(ರು)'ರನ್ನು ಕದ್ದರೆ ಅದು ತಪ್ಪಲ್ಲ ಬದಲಾಗಿ ಅದೊಂದು ಅವರ ಸ್ಪೇಷಲ್ ಟಾಲೆಂಟ್.
ನಾಗತಿಹಳ್ಳಿ ಕೆಲವರ ಪಟ್ಟಿ ಮಾಡಿ ಅದಕ್ಕೆ ತಕ್ಕಂತೆ ಕಥೆಚಿತ್ರಕಥೆ ಹೆಣೆದಿದ್ದಾರೆ. ಹೀಗೆ ಅವರು ನಿರ್ಧರಿಸಿ ನಿದರ್ೇಶಿಸಿರುವ ಸಿನಿಮಾದಲ್ಲಿ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ರಂಗಾಯಣ ರಘು ಮತ್ತೊಂದು ಕಡೆ ನವಿಲುಗರಿ ಚಾನೆಲ್ಲಿನ ಮುಖ್ಯಸ್ಥ ಬಾಲಾಜಿ ಜೊತೆ ಮಾತನಾಡುವುದು ಮತ್ತು ಅದರ ಕಲಾ ನಿದರ್ೇಶಕ ಅರುಣ್ ಸಾಗರ್ ಸೆಟ್ವಕರ್್ ಬಗ್ಗೆ ಗೇಲಿ ಮಾಡುವುದು ಹಾಗೆಯೇ ನವಿಲುಗರಿ ಚಾನೆಲ್ ಮಾಲಿಕರಿಗೆ ಚಂಡಿಯಾಗ ಮಾಡಿಸುತ್ತೇನೆ ಎಂದು ಹೇಳುವುದೆಲ್ಲಾ ನಮ್ಮ ಕನ್ನಡ ಕಸ್ತೂರಿ ಚಾನೆಲ್ ಕುರಿತಾಗಿದ್ದು ಮತ್ತು ಅದರ ಮಾಲಿಕ ಯಜ್ಞಯಾಗದಿಗಳ ಒಡೆಯರಾದಂತ ಅದರ ಮಾಲಿಕರಾದ ಮಹಾನ್ ದೈವಭಕ್ತರಾದ ಸನ್ಮಾನ್ಯ ಶ್ರೀ ದೇವಗೌಡ ಮತ್ತು ಅವರ ಮಗ ಮರಿ ಸನ್ಮಾನ್ಯ ಸಿ(ರೆ)ರಿ ಕುಮಾರಸ್ವಾಮಿಯವರಾಗಿದ್ದಾರೆ.
ಸಿನಿಮಾದ ಸೆಕೆಂಡ್ ಆಫ್ನಲ್ಲಿ ರಂಗಾಯಣ ರಘು ಒಬ್ಬ ಜ್ಯೋತಿಷಿಯಾಗಿ ಬದಲಾಗುವ ಪಾತ್ರವನ್ನು ನಾವು ಈ ಬ್ರಹ್ಮಾಂಡದಲ್ಲಿ ಸಾಕಷ್ಟು ಜನರನ್ನು ಕಾಣಬಹುದು, ಸ್ವಲ್ಪ ಕೆದಕಿ ನೋಡಿದರೆ ಬ್ರಹ್ಮಾಂಡದ ಇತಿಹಾಸದಲ್ಲಿ ಆ ಪಾತ್ರವನ್ನು ನಾವು ಕಾಣಬಹುದು.
ಸಿನಿಮಾದ ಫಸ್ಟ್ ಆಫ್ನಲ್ಲಿ ರಂಗಾಯಣ ರಘುವಿನ ಪಾತ್ರ ತುಂಬಾ ಬೋರ್ ಹೊಡಿಸುತ್ತದೆ ಜೊತೆಗೆ ಪ್ರೇಕ್ಷಕನಿಗೆ ರಘುವಿನ ಪಾತ್ರದ ಮೇಲೆ ಸಿಟ್ಟು ಬರುವತನಕ ನಾಗತಿಹಳ್ಳಿ ಎಳೆದು ತರುತ್ತಾರೆ. ಇದು ಒಂದು ರೀತಿಯಲ್ಲಿ ಅವರು ಪ್ರೇಕ್ಷಕರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗತಿಹಳ್ಳಿ ಇತ್ತೀಚಿಗೆ ಏನನ್ನೊ ಹುಡಕಲು ಒಂಟವರಂತೆ ಕಾಣುತ್ತಾರೆ, ಒಂದು ರೀತಿಯಲ್ಲಿ ಅವರು ಕಮಷರ್ಿಯಲ್ ಮೂಲಕ ಕ್ಲಾಸಿಕಲ್ ಸಿನಿಮಾ ಮಾಡಲು ಹೊಸ ಹಾದಿಯನ್ನು ಕಂಡುಕೊಳ್ಳುತ್ತಿದ್ದಾರೆ ಅನಿಸುತ್ತದೆ ಆದರೆ ಹಾದಿ ಸುಗಮವಿಲ್ಲ.
ಸಿನಿಮಾದಲ್ಲಿ ರಘುವಿನ ಬದಲಾವಣೆಯನ್ನು ನಿದರ್ೇಶಕರು ತುಂಬಾ ಅರ್ಥಗಬರ್ಿತವಾಗಿ ತೋರಿಸಿದ್ದಾರೆ. ಮೊದಲ ಆಫ್ನಲ್ಲಿ ಮನುಷ್ಯ ಬದುಕಲಿಕ್ಕೇ ಮಾತೊಂದಿದ್ದರೆ ಸಾಕು ಎನ್ನುವ ರಘುವಿನ ಧ್ಯೇಯ ವಾಕ್ಯದಂತೆ ಅವನ ಪಾತ್ರ ಸೆಕೆಂಡ್ ಆಫ್ನಲ್ಲಿ ಜ್ಯೋತಿಷ್ಯವನ್ನು ಆರಿಸಿಕೊಳ್ಳುವುದು ಮತ್ತೇ ಮೋಸ ಮಾಡುವ ಪ್ರವೃತ್ತಿಗೆ ಇನ್ನೊಂದು ಮುಖ ಹೊಂದಿಸುವುದು. ಮೋಸ ಹೋಗುವವರು ಇರುವತನಕ ಮೋಸ ಮಾಡುವವರು ಇರುತ್ತಾರೆ. ಇದು ಮೇಲ್ನೋಟಕ್ಕೆ ಕಾಣುವ ಚಿತ್ರದ ಸಾರಂಶ.
ಎಡಪಂಥ ಅಥಾವ ಬಲ ಪಂಥ ಎನ್ನುವುದಕ್ಕಿಂತ ಬದುಕ ಪಂಥ ಬಹು ಮುಖ್ಯ ಮತ್ತು ಅದರ ಶೃಂಗಾರವನ್ನು ಕಳೆದುಕೊಳ್ಳಬೇಡಿ ಎನ್ನುವುದಕ್ಕೆ ಉದಾಹರಣೆಯಾಗಿ ಕಿಟ್ಟಿ ಉಳಿದುಕೊಳ್ಳುವ ಅಪಾಟರ್್ಮೆಂಟ್ನ ಸೆಕ್ಯುರಿಟಿಯ ಗಂಡ ಹೆಂಡತಿ ಪ್ರೀತಿಗೆ ಕಿಟ್ಟಿ ಮರಳಾಗುತ್ತಾನೆ ಹೊರತಾಗಿ ರಂಗಾಯಣ ರಘುವಿನ ಮೇಲಿನ ಸಿಟ್ಟಿನಿಂದಲ್ಲ.
ಮನುಷ್ಯನ ಜೀವನ ಕೊಡುಕೊಳ್ಳುವಿಕೆಯಲ್ಲಿ ಅವಲಂಬಿಸಿದೆ, ಅದು ಪ್ರೀತಿಯಾಗಿರಬಹುದು, ಹಣವಾಗಿರಬಹುದು ಅಥಾವ ಮತ್ತೀನ್ನೇನು ವಸ್ತುವಾಗಿರಬಹುದು. ಜೀವನವನ್ನು ಪಂಥಗಳ ಲೆಕ್ಕಚಾರಗಳಡಿಯಲ್ಲಿ ತಂದು ಪಂಥಗಳಿಗೆ ಕಟ್ಟುಬಿದ್ದು ನಿಜವಾದ ಬದುಕಿನ ಸಾರವನ್ನು ಕಳೆದುಕೊಳ್ಳಬೇಡಿ.

No comments: