Monday, June 22, 2009

ನಾಟಕ... ನಾಟಕ... ಬೀದಿ ನಾಟಕ...

ಗಂಧ ಗಾಳಿಯರಿಯದ ವಯಸ್ಸು
ಕೂಗಿದನೊಮ್ಮೆ ರಸ್ತೆಯಲ್ಲಿ ನಿಂತು
ನಾಟಕ... ನಾಟಕ... ಬೀದಿ ನಾಟಕ...

ಬೇಟಿಯಾದನು ಕೆಲವೆ ದಿನಗಳಲ್ಲಿ
ಅತಿ ಹಿರಿಯ ಬೀದಿಗಳನ್ನು ಮತ್ತು ಅಲ್ಲಿ ತನ್ನಂತೆಯೆ ಕೂಗಿ ಬೆಳೆದವರನ್ನು
ಹಿಗ್ಗಿದನು... ಕುಗ್ಗಿದನು...
ಹಿರಿಹಿರಿ ಹಿಗ್ಗಿ ಮುಂದೊಂದು ದಿನ ದೊಡ್ಡ ಬೀದಿಗಳ ಕನಸು ಕಂಡನು

ರಕ್ತದ ಬಣ್ಣ ಒಂದೇ ಬಡವನಿಗೂ ಶ್ರೀಮಂತನಿಗೂ...
ದಿಲ್ಲಿಯಲಿ ಸರ್ಕಾರದ ಜೋರು... ನಮ್ಮ ಹಳ್ಳಿಯಲಿ ಕೂಗಿಲ್ಲದ ಗೋಳು...
ಕೆಲವೆ ದಿನಗಳಲ್ಲಿ
ಗಾಯಕನಾದ
ನಟನಾದ
ಕಲೆಗೆ ಮೆಚ್ಚಿ ನಾಟಕದ ಕಂಪನಿ ಮಾಲಿಕ ನೀಡಿದ ದಿನಕ್ಕೆ ನೂರು ರೂ ಜೇಬಿಗಿಳಿಸಿ
ರಸ್ತೆಗುಂಟಾ ಅದೇ ಹಾಡುಗಳನ್ನು ಗುಣುಗುತ್ತಾ ತನ್ನಾ ಮನೆ ಸೇರುತ್ತಿದ್ದ.

ದಿನಾ, ವಾರ, ತಿಂಗಳು ಹಾಗೆಯೇ ವರ್ಷಗಳು ಕಳೆದಂತೆ
ತಾಲೀಮು ನೆಡೆಸುತ್ತಿದ್ದ ಜಾಗ ದೊಡ್ಡ ಮನೆಯಾಗಿ ಬೆಳೆಯತೊಡಗಿತ್ತು.
ಅಕ್ಕ ಪಕ್ಕದ ಜಾಗಗಳೆಲ್ಲಾ ಒಂದಾಗಿ ಅವುಗಳಿಗೊಂದು ತಡಗೋಡೆ ಕಟ್ಟಲ್ಪಟ್ಟಿತು.

ಹುಡುಗ ನೂರಾರು ಹಾಡುಗಳ ಕಲಿತ ನಾಟಕಗಳ ಕಲಿತ.
ಅವ್ವ ಬೈದಳು ಮುಂದೊಂದು ದಿನ
ದುಡಿಯುವದನ್ನು ಕಲಿ ಮಗ...

ನಾಟಕ... ನಾಟಕ... ಬೀದಿ ನಾಟಕ...