Tuesday, May 5, 2009

ಎಲ್ಲಾ ತಪ್ಪುಗಳ ಹಿಂದೊಂದು ಸರಿ ಕಾಣಿಸತೊಡಗಿದೆ.


ಬಿರು ಬೇಸಿಗೆಯ ಕೊನೆಯ ದಿನಗಳು, ಬಿಸಿಲಿನಿಂದ ಬೆಂದು ಬೇಸತ್ತಿದ್ದ ಜೀವಕ್ಕೊಂದು ತಣ್ಣನೆಯ ಸುಯ್ಗಾಳಿ, ಕಛೇರಿಯ ಕೆಲ ಘಟನೆಗಳನ್ನು ಮೆಲುಕು ಹಾಕುತ್ತಾ ಬೀಳುತ್ತಿದ್ದೇನೆ ಎಂಬ ಮಳೆಯ ಬೆದರಿಕೆಗೆ ಬೆನ್ನಕೊಟ್ಟು ಕಛೇರಿಯಿಂದ ಹೊರಬಿದ್ದ ನನ್ನ ತಲೆಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬ ಬಿಸಿ ಬಿಸಿ ಚಚರ್ೆ ನೆಡೆದಿತ್ತು ಆದರೆ ನಾನು ಮಳೆ ಬರುವ ಮುಂಚಿನ ತಣ್ಣನೆ ಗಾಳಿಯಲ್ಲಿ ಮೈ ಮರೆತು ನಡೆದಿದ್ದೆ.
ದೂರದ ಊರಿನಿಂದ ಬಂದು ಇಲ್ಲಿ ಮಾಡುತ್ತಿರುವದಾದರು ಏನು ಎಂಬುದು ನನ್ನೊಳಗೆ ನಾನು ಕಂಡುಕೊಂಡ ಬಹಳದಿನಗಳ ನಂತರದ ಸತ್ಯವಾಗಿತ್ತು. ಕನಸುಗಳ ಬೆನ್ನತ್ತಿ ಓಡಲು ಪ್ರಾರಂಬಿಸಿದ ನಾನು ಇಂದು ಬಾರ್ಗಳ ಮುಂದೆ ಬಂದು ನಿಂತಿದ್ದೇನೆ ಎಂಬ ಭಯಾನಕತೆಯನ್ನು ನೆನೆದು ದುಗಡಗೊಂಡಿದ್ದೆ. ಕುಡಿಯುವದನ್ನು ಬಿಟ್ಟು ಇತರೆ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂಬ ಬಹುದಿನಗಳ ಬಹು ಚಚರ್ಿತ ವಿಷಯ ಯಾಕೊ ಇತ್ತೀಚಿಗೆ ಸವಕಲಾಗಿ ಕುಡಿಯುವದು ತಪ್ಪಲ್ಲ ಅದು ನಮ್ಮ ನೋವಗಳನ್ನು ಮರೆಸಿ ಕ್ಷಣಕಾಲದ ಸುಖ ನೀಡುತ್ತದೆ ಎಂಬಲ್ಲಿಯ ತನಕ ಕಟು ಸತ್ಯ ಮುಟ್ಟಿಬಿಟ್ಟಿದ್ದೇನೆ.
ಬಹಳ ದೊಡ್ಡ ಕನಸುಗಳನ್ನೊತ್ತು ಮನೆಯಲ್ಲಿ ಅರ್ಥವಾಗದ ವಿಷಯಗಳನ್ನು ಓದಿ ಅವರೊಂದಿಗೆ ಮನಸ್ಥಾಪವನ್ನು ಕಟ್ಟಿಕೊಂಡಿದ್ದ ನನಗೆ ಓದು ಮುಗಿದ ಮೇಲೆ ನನಗೆ ಸಿಕ್ಕ ಸಂಬಳವ ನೆನೆದು ಮನೆಯವರೆಲ್ಲಾ ತಪ್ಪಾಯ್ತು ಎಂದು ಕಪ್ ಕಪಾಳ ಹೊಡೆದುಕೊಂಡಾಗ ಕೊಂಚ ಮನಸ್ಸಿಗೆ ನೆಮ್ಮದಿಯಾಗಿತ್ತು. ಚಿಕ್ಕವನಿಂದ ಅತಿ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಬೆಳೆದವನು. ದೊಡ್ಡ ದೊಡ್ಡ ಕನಸುಗಳ ಹೊತ್ತ ಮೈ ಬಾರಕ್ಕೆ ದಣಿವಾದಾಗ ಫೇಲ್ ಆದೆನೇನು ಎಂಬ ಸಣ್ಣ ಡೌಟು ಈಗಲು ನನ್ನ ತಲೆಯಲ್ಲಿದೆ.
ಹುಟ್ಟಿದ್ದು ಮತ್ತೆಲ್ಲೊ ಓದಿದ್ದು ಮತ್ತೆಲ್ಲೊ ಬದುಕುತ್ತಿರುವುದು ಮತ್ತೆಲ್ಲೊ ಎಂಬ ಈ ಮತ್ತೆಲ್ಲೊಗಳ ನಡುವೆ ಇಂದು ರಿಯಲೈಸ್ ಆಗಿರುವ ಮತ್ತೊಂದು ಮತ್ತೆಲ್ಲೊ ಎಂದರೆ ನಾನು ಮತ್ತೆ ಅದೆಲ್ಲಿಗೆ ಓಡುತ್ತೇನೆ ಎಂಬ ಭಯ ಕಾಡತೊಡಗಿದೆ. ಹಳ್ಳಿಯನ್ನು ಬಿಟ್ಟು ಅಪ್ಪ ಅವ್ವನ ಸಾಂಗತ್ಯ ಬಿಟ್ಟು ಕೇವಲ ಹಣಕ್ಕಾಗಿ ದುಡಿಯುತ್ತಿದ್ದೇನೆ ಎಂಬ ಭಾವನೆ ಇಂದು ನನ್ನನ್ನು ಮತ್ತು ನನ್ನ ತನವನ್ನು ತಿನ್ನತೊಡಗಿದೆ.
ಎಲ್ಲಾ ತಪ್ಪುಗಳ ಹಿಂದೊಂದು ಸರಿ ಕಾಣಿಸತೊಡಗಿದೆ.
ಎದುರಲ್ಲಿ ಹುಡುಗಿಯೊಬ್ಬಳು ರೋಡ್ ದಾಟುತ್ತಾ ಎಡವಿ ಬಿದ್ದುಬಿಟ್ಟಳು, ಸೀನ್ ಕಾಣಿಸಿತು ಎಂದು ಖುಷಿಯಾದ ನನಗೆ ಎಮ್.ಜಿ ರೋಡಿನ ಟ್ರಿನಿಟಿ ಸರ್ಕಲ್ ಮುಟ್ಟಿದಾಗ ಮೂಲೆಯಲ್ಲೊಬ್ಬ ಮಲಗಿ ಒದ್ದಾಡುತ್ತಿರುವುದು ಕಾಣಿಸಿತು. ಮುಂದೆ ಹೋದೆ ನೋಡಲು ಕಾರಣ ಅದು ನಮ್ಮ ದೇಶದ ಮಿಲಿಟರಿ ಬಟ್ಟೆಯಂತೆ ಕಾಣಿಸಿತು.
ಅವನೊಳಗೆ ಅವನು ಮೆಲ್ಲಗೆ ಗೊಣಗುತ್ತಿದ್ದ, ಮೈ ಜಾನ ಹೈ, ಐ ವಾನ್ ಸಿ ಮೈ ಮಾಮ್.ಐ ಕಾಂಟ್ ಸ್ಟೇ ಇಯರ್, ಮುಜೆ ಮೆರಾ ಫ್ಯಾಮಿಲಿ ಚಾಯಿಯೆ..
ಒಂದೆ ಸತ್ಯ ಮತ್ತು ಸತ್ವ ಅವನೊಳಗಿತ್ತು ' ಅವನು ನೆಡೆಯಲಾರದಷ್ಟು ಕುಡಿದಿದ್ದ'
ಕುಡಿದು ಬಿದ್ದವನ ಸುತ್ತಾ ನೆರೆದ ಜನರೆಲ್ಲಾ ಆಡಿದ್ದು ಮತ್ತು ಆಡಿಕೊಳ್ಳುತ್ತಿದ್ದು ಒಂದೇ ಮಾತು ' ಮಿಲಿಟರಿಯವರೆ ಇಂಗಾದ್ರೆ'
ತಂಗಾಳಿ ನಿಂತು ಮಳೆ ಸುರಿಯಲಾರಂಬಿಸಿತು, ನೆರೆದವರೆಲ್ಲಾ ಓಡಿ ಹೋಗಿ ಚಾಟು ಸಿಕ್ಕ ಕಡೆ ನಿಂತುಕೊಂಡರು, ಅವನು ಮಳೆಯಲ್ಲಿ ಹಾಗೆ ಬಿದ್ದುಕೊಂಡು ಗೊನಗುತ್ತಿದ್ದ ಆ ಶಬ್ದಗಳು ಯಾರಿಗೂ ಕೇಳಿಸಬಾರದು ಎಂಬ ಫಮರ್ಾನಿನಂತೆ ಪ್ರಕೃತಿ ಟೊಂಕ ಕಟ್ಟಿತ್ತು. ಮನೆ ಹತ್ತಿರವಿದ್ದ ನಾನು ಹೇಗಿದ್ದರು ಮನೆ ಸೇರುತ್ತೇನೆ ಮತ್ತು ಬಟ್ಟೆ ಬದಲಾಯಿಸುತ್ತೇನೆ ಎಂಬ ದೈರ್ಯದೊಂದಿಗೆ ಮಳೆಯಲ್ಲೇ ನೆಡೆದಿದ್ದೆ.

No comments: