Tuesday, May 5, 2009

ಮಾರೆಮ್ಮ ಮತ್ತು ಮೋಹಿರಮ್ಮ



ದೂರದ ಉತ್ತರ ಕನರ್ಾಟಕದಿಂದ ಬಂದಿದ್ದ ನಾನು ಡಿಗ್ರಿ ಮುಗಿಸಿದ್ದು ದಿ ಗ್ರೇಟ್ ಮಹಾರಾಜ ಕಾಲೇಜಿನಲ್ಲಿ, ಇಂಗ್ಲೀಷ್ ಬಾರದ ನನಗೆ ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿಸಿದ್ದು ನನ್ನ ಮಹಾರಾಜ ಕಾಲೇಜ್. ನನ್ನ ಮಾಸ್ಟರ್ ಡಿಗ್ರಿಯಲ್ಲಿ ಇಂಗ್ಲೀಷ್ ಮಾತನಾಡಲೂ ಬರದಿದ್ದ ನನಗೆ ಆಗಲೇ ಇಂಗ್ಲೀಷ್ ಅರ್ಥವಾಗತೊಡಗಿತ್ತು.
ನನ್ನ ತರಗತಿಯಲ್ಲಿ ಪರಿಚಯವಾದವಳು ಮೋಹಿರಾ ಫ್ರಮ್ ಉಜ್ಬೇಕಿಸ್ತಾನ್, ಕೇವಲ ಕನರ್ಾಟಕದಲ್ಲಿ ಜಿಲ್ಲೆಯ ಗಡಿಗಳನ್ನು ದಾಟಿ ಬಂದಿದ್ದ ನನಗೆ ನಿಜವಾಗಲೂ ಸ್ಪೂತರ್ಿಯಾಗಿದ್ದು ದೇಶದ ಗಡಿಗಳನ್ನು ದಾಟಿ ಬಂದಿದ್ದ ನನ್ನ ಕ್ಲಾಸ್ಮೇಟ್ಗಳು. ಅವರಲ್ಲೊಬ್ಬಳಾದ ಮೋಹಿರಳ ಬಗ್ಗೆ ನನ್ನ ಈ ಕತೆ.
ಅವಳು ತುಂಬಾ ಗಟ್ಟಾಣಿಗಿಂತಿ, ಪ್ರತಿಯೊಂದಕ್ಕೂ ಪ್ರತಿಯುತ್ತರ ನೀಡುತ್ತಿದ್ದ ಸ್ಟ್ರಾಂಗೆಸ್ಟ್ ವುಮೆನ್. ದಿನ ಕಳೆದಂತೆ ಅವಳ ಮತ್ತು ನನ್ನ ನಡುವೆ ಸ್ನೇಹ ಬೆಳೆಯುತ್ತಾ ಸಾಗಿತ್ತು. ಅವಳಿಗೆ ಪ್ರತಿಯುತ್ತರ ನೀಡಲಾಗದ ಪರಿಸ್ಥಿತಿಯಲ್ಲಿದ್ದ ನನಗೆ ಅರ್ದಂಬದ್ದ ಇಂಗ್ಲೀಷ್ ಕಲಿಸಿದವಳು ಅವಳೆ, ಅವಳಿಗೆ ನಾನು ಚಿರಋಣಿ.
ಮೋಹಿರ ತುರಕರ ದೇಶದಿಂದ ಬಂದವಳಾಗಿದ್ದ ಕಾರಣ ದಿನ ತಪ್ಪಂದಂತೆ ನಮಾಜ್ ಮಾಡುತ್ತಿದ್ದಳು ಉಳಿದಂತೆ ತುಂಬಾ ಮಾಡ್ರನ್ ಹೆಣ್ಣಾಗಿದ್ದಳು.
ದಿನ ಕಳೆದಂತೆ ನಮ್ಮ ಇಲ್ಲಿಯ ತನಗಳನ್ನು ಬೆಳಸಿಕೊಳ್ಳುತ್ತಾ ಅವಳು ಮೈಸೂರಿನಲ್ಲಿ ನೆಡೆಯುತ್ತಿದ್ದ ಸ್ಥಳೀಯ ಹಬ್ಬ ಹರಿದಿನಗಳಿಗೆ ಬೇಟಿ ನೀಡತೊಡಗಿದಳು. ತರಗತಿಗೆ ಬರುವ ಸಮಯದಲ್ಲಿ ಅಥಾವ ಹಾದಿಯಲ್ಲಿ ವಾದ್ಯಗಳ ಶಬ್ದ ಕೇಳಿದರೆ ಸಾಕು ಅವತ್ತು ಅವಳು ತರಗತಿಗೆ ಚಕ್ಕರ್. ಹೇಳಿ ಕೇಳಿ ಸರಸ್ವತಿಪುರಂನಲ್ಲಿ ವಾಸಿಸುತ್ತಿದ್ದ ಅವಳು ಕುಕ್ಕರಳ್ಳಿ ಕೆರೆ ಹಳ್ಳಿಯನ್ನು ದಾಟಿ ಬರಬೇಕಿತ್ತು, ಬೆಳೆದ ಮೈಸೂರಿನಲ್ಲಿ ಇನ್ನೂ ಹಳ್ಳಿಯ ಸೊಗಡು ಮತ್ತು ಆಚರಣೆಗಳನ್ನು ಉಳಿಸಿಕೊಂಡಿರುವ ಈ ಹಳ್ಳಿಯಲ್ಲಿ ಒಂದಲ್ಲಾ ಒಂದು ಎನ್ನವಂತೆ ಆಚರಣೆಗಳಿರುತ್ತಿದ್ದವು.
ಮೊದಲನೇ ವರ್ಷದಲ್ಲಿ ಇಲ್ಲಿ ನೆಡೆದ ಗ್ರಾಮ ದೇವತೆ ಆಚರಣೆಯನ್ನು ನೋಡಲು ಕುಳಿತಿದ್ದ ನಮಗೆ ಹಳ್ಳಿಯವರು ಆಡಿದ್ದ ನಾಟಕ ಮತ್ತು ಇತರೆ ಎಲ್ಲಾ ದೃಶ್ಯಗಳನ್ನು ಅವಳಿಗೆ ನಾನು ಟ್ರಾನ್ಸ್ಲೇಟ್ ಮಾಡುವುದರಲ್ಲಿಯೇ ಕಳೆದಿದ್ದೆ. ಅವಳನ್ನು ಕಂಡರೆ ಭಯವಾಗತೊಡಗಿದ್ದ ನನಗೆ ಅವಳಿಂದ ತಪ್ಪಿಸಿಕೊಳ್ಳುವುದೆ ಹರ ಸಹಾಸವಾಗಿತ್ತು.
ಅವಳಿಗೆ ನನ್ನ ಸ್ನೇಹ ಅತ್ಯಗತ್ಯವಾಗಿತ್ತು ಕಾರಣ ಒಂದು ನನಗೆ ಇವೆಲ್ಲಾ ಆಚರಣೆಗಳು ಇಷ್ಟಾ ಎರಡು ಅವಳಿಗೆ ಮಾಹಿತಿ ನೀಡುವವರು ಬೇಕಾಗಿತ್ತು ಮೂರನೆಯ ಅತಿ ಮುಖ್ಯ ಕಾರಣವೆಂದರೆ ನನ್ನ ಹಾಸ್ಟೆಲ್ ಅವಳ ಮನೆಯ ಸಮೀಪದಲ್ಲಿದ್ದ ಕಾರಣ ತೀರಾ ಕೈಗೆಟುಕುವ ಗೆಳೆಯನಾಗಿದ್ದೆ.
ಹೀಗೆ ದಿನಾ ಕಳೆದಂತೆ ಅವಳು ನಮ್ಮ ಆಚಾರ ವಿಚಾರಗಳ ಬಗ್ಗೆ ಕೇವಲವಾಗಿ ಮಾತನಾಡತೊಡಗಿದಳು, ಇದರಿಂದ ಕೋಪಗೊಂಡ ನಾನು ಇನ್ನೂ ಮುಂದೆ ಅವಳ ಜೊತೆ ತಿರುಗಾಡುವುದಿಲ್ಲ ಎಂದು ಶಪತು ತೊಟ್ಟು ಅವಳ ಮುಖದ ಮೇಲೆ ಹೊಡೆದಂತೆ 'ಐ ಡೊಂಟ್ ವಾಂಟ್ ಯುವರ್ ಫ್ರೆಂಡ್ಶಿಪ್' ಎಂದು ಹೇಳಿಬಿಟ್ಟಿದ್ದೆ.
ಇದೆಲ್ಲಾ ಮುಗಿಯುವದರೊಳಗೆ ಒಂದು ವರ್ಷ ಕಳೆದಿತ್ತು, ಬೇಸಿಗೆಯ ರಜಕ್ಕಾಗಿ ನನ್ನೂರಿಗೆ ತೆರಳಿದ್ದ ನಾನು ಮನೆಯವರೊಂದಿಗೆ ಮತ್ತು ನನ್ನ ಬಾಲ್ಯ ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯುತ್ತಿದ್ದೆ. ನಡುವೆ ಒಂದು ನಡುರಾತ್ರಿಯಲ್ಲಿ ನನ್ನ ಫೋನ್ ರಿಂಗಣಿಸತೊಡಗಿತ್ತು ಇದರಿಂದ ಕೋಪಗೊಂಡ ನನ್ನಪ್ಪ ಇವನೇನು ದೊಡ್ಡ ವ್ಯವಾರಸ್ಥ ನಡರಾತ್ರ್ಯಾಗ ಇವನಿಗೆ ಫೋನ್ ಬತರ್ಾವೆ ಅಂದದ್ದಕ್ಕೆ ಕಾಲ್ ಯಾರದು ಎಂದು ಸಹಾ ನೋಡದೆ ನಾನು ಅದರ ಕತ್ತು ಹಿಸುಕಿ ಕೊಲೆ ಮಾಡಿ ತಿರುಗಿ ಮಲಗಿಬಿಟ್ಟೆ.
ಮಾರನೆ ದಿನ ಮದ್ಯಾಹ್ನ ಅವಳಿಗೆ ಫೋನ್ ಮಾಡಿದೆ, ಕ್ಷೀಣ ದ್ವನಿಯಲ್ಲಿ ' ಐ ವಾಂಟ್ ಕಮ್ ಯುವರ್ ಹೋಮ್, ಐ ಯಮ್ ಮಿಸ್ಸಿಂಗ್ ಮೈ ಹೋಮ್. ಇಯರ್ ಎವರಿಬಡಿ ವೆಂಟ್ ದೇರ್ ನೇಟಿವ್.' ಒಂದು ಕ್ಷಣ ತಳಮಳಗೊಂಡ ನಾನು ಒಂದು ನಿಮಿಷ ಎಂದು ಫೋನ್ ಕಟ್ ಮಾಡಿದೆ.
ನನ್ನ ಸಮಸ್ಯೆ ಬೇರೆಯ ತರದಾಗಿತ್ತು. ಹುಡುಗಿ ಮನೆಗೆ ಬರ್ತಾಳೆ ಎನ್ನುವುದು. ಉತ್ತರ ಕನರ್ಾಟಕದಲ್ಲಿ ಇನ್ನೂ ಎಲ್ಲಾ ತರದ ಸಮಸ್ಯೆಗಳು ಇರುವ ಕಾರಣ ಮತ್ತು ಹಿಂದುಳಿದ ನಾಡಗಿರುವ ಕಾರಣ ಅಷ್ಟು ಸುಲಬದ ವಿಷಯವಾಗಿರಲಿಲ್ಲ ನನಗೆ, ಅವಳು ನನ್ನ ಮನೆಗೆ ಬರುವುದು ಸಣ್ಣ ವಿಷಯವಲ್ಲ. ನನ್ನ ಮನೆಯವರಿಗೆ ಲವ್ ಪದ ಬಿಟ್ರೆ ಬೇರೆ ಪದ ಗೊತ್ತಿರಲಿಲ್ಲ ಮತ್ತು ಅದಕ್ಕೆ ಬೇರೆಯದೆ ಅರ್ಥವಿದ್ದ ಕಾರಣ ನಾನು ಒಂದು ಕ್ಷಣ ವಿಚಲಿತನಾದೆ. ಅವಳಿಗೆ ಫೋನ್ ಮಾಡಿ ' ನಾನು ನಮ್ಮ ಮನೆಯಲ್ಲಿಲ್ಲ, ಬೇರೆ ಕಡೆ ಇದ್ದೇನೆ, ನನ್ನ ಮನೆಯವರು ಸಹಾ. ನಾನು ಇವತ್ತು ಮೈಸೂರಿಗೆ ಬರುತ್ತಿದ್ದೇನೆ ಡೋಂಟ್ವರಿ' ಎಂದು ಕಟ್ ಮಾಡಿದೆ.
ಮನೆಯಲ್ಲಿ ಒಂದು ಸ್ವಲ್ಪ ಸುಳ್ಳು ಮತ್ತು ಒಂದ್ ಸ್ವಲ್ಪ ಸತ್ಯ ಹೇಳಿ ಗೆಳೆಯನಿಗೆ ಆಕ್ಸಿಡೆಂಟಾಗಿದೆ, ಅವನು ಬೇರೆ ಊರವನು ಮನೆಯಲ್ಲಿ ತುಂಬಾ ಬಡವರು ನಾನು ಹೋಗಬೇಕು ಅವನಿಗೆ ನನ್ನ ಅಗತ್ಯ ಇದೆಯೆಂದು ಹೇಳಿ ಹೊರಟುಬಿಟ್ಟೆ.
ಅಷ್ಟೆತ್ತರದ ದಡೋತಿ ಹುಡುಗಿ ಸಣಕಲಾದಂತೆ ಕಂಡಳು, ಬಿಕ್ಕಿ ಬಿಕ್ಕಿ ಅಳತೊಡಗಿದ್ದಳು. ತನ್ನ ದಿನವನ್ನೆಲ್ಲಾ ಮನೆಯಲ್ಲೇ ಕಳೆಯುತ್ತಿದ್ದಳು. ಅವಳಿಗೆ ನನ್ನ ಸಮಾದಾನ ಅಸಮದಾನ ತರಿಸಿತ್ತು. ಪ್ರತಿ ಮಾತಿಗೂ ಯು ಕಾಂಟ್ ಅಂಡರ್ಸ್ಟಾಂಡ್ ಮೈ ಪೇನ್ ಎನ್ನುತ್ತಿದ್ದಳು. ಅವಳು ಏನೇ ಹೇಳಿದರು ಸಿಟ್ಟು ಬರಲಾರದಂತ ಸಂಧಿಗ್ಧತೆಯಲ್ಲಿ ಎಲ್ಲಾ ಗೆಳೆಯರನ್ನು ಇರಿಸಿದ್ದಳು.
ಮತ್ತೇ ಕಾಲೇಜ್ ಪ್ರಾರಂಭವಾಯಿತು, ಅವಳು ತರಗತಿಗಳಿಗೆ ಚಕ್ಕರ್ ಹಾಕತೊಡಗಿದ್ದಳು. ಬರೀ ನಮಾಜಿನಲ್ಲಿ ತಲ್ಲೀನಳಾಗತೊಡಗಿದ್ದಳು. ಮೊದಲ ವರ್ಷದಲ್ಲಿದ್ದ ಅವಳ ಲವಲವಿಕೆ ನಿಧಾನಕ್ಕೆ ಮಾಯವಾಗತೊಡಗಿತು. ಜನರಲ್ಲಿ ಬೆರೆಯುವದನ್ನು ನಿಲ್ಲಿಸತೊಡಗಿದ್ದಳು.
ಮತ್ತೇ ಹಲಗೆಯ ನಾದ ಕುಕ್ಕರಳ್ಳಿ ಕಡೆಯಿಂದ ಕೇಳಿಸಿತು, ಗ್ರಾಮದೇವತೆ ಹಬ್ಬಕ್ಕೆಂದು ಊರಿಗೆ ಊರೆ ತಯಾರಿ ನೆಡೆಸಿತ್ತು. ಅದೆಲ್ಲಿಂದ ಬಂತೊ ಅವಳಿಗೆ ಉತ್ಸಾಹ ತನಗೆ ಅರ್ಥವಾಗದ ಮತ್ತು ಗೊತ್ತಿರದ ದೇವತೆ ಮುಂದೆ ನಿಂತು ಮುಖವರಳಿಸಿದಳು. ಮಾರೆಮ್ಮ ಇಜ್ ಲೈಕ್ ಮೋಹಿರಮ್ಮನಾ, ಇಟ್ಸ್ ಬಿಟ್ ಸಿಮಿಲರ್ನಾ ಎಂದಳು ?
ಈಗ ತನ್ನ ದೇಶದಲ್ಲಿರುವ ಅವಳು ಕಾಲ್ ಮಾಡಿದಾಗಲೆಲ್ಲಾ ಮಾರೆಮ್ಮನಿಗೆ ಪ್ರೇ ಫಾರ್ ಮಿ ಅಂತಾಳೆೆ. ನಾವು ನೋಡಿದ್ದ ಹಬ್ಬಗಳ ಅಪ್ಡೇಟ್ ಕೇಳ್ತಾಳೆ. ಪ್ರತಿ ಹಬ್ಬಕ್ಕೂ ವಿಷ್ ಮಾಡ್ತಾಳೆ.

No comments: